SHARE

ಬೆಳಗಾವಿ: ಜಾನೇವಾಡಿ ಬಸ್ ಮಾರ್ಗದ ಬಸ್ ಕರ್ತವ್ಯದ ಮೇಲಿದ್ದ, ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಬಸ್ ನಿರ್ವಾಹಕನ ಮೇಲೆ ಕೆಲ ಕಿಡಿಗೇಡಿಗಳು ತಡರಾತ್ರಿ ಹಲ್ಲೆ ನಡೆಸಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಾನೇವಾಡಿ-ಬೆಳಗಾವಿ ಮಾರ್ಗದ ಬಸ್ ನಿರ್ವಾಹಕ ಮುತ್ತಪ್ಪ ವಾಲ್ಮೀಕಿ(೩೯) ಎಂಬಾತನ ಮೇಲೆ ಕೃಷ್ಣಾ ರಾಮಾ ಹೊಸೂರಕರ ಹಾಗೂ ಕಲ್ಲಪ್ಪ ನಾಯಿಕ ಎಂಬಿಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾನೇವಾಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಸರಕಾರಿ ಬಸ್ ನಿರ್ವಾಹಕ ಶೌಚಕ್ಕೆ ತೆರಳಿದ್ದ ವೇಳೆ ಸ್ಕಾರ್ಪಿಯೊ ವಾಹನದಲ್ಲಿ ಆಗಮಿಸಿದ ಕೆಲ ಆಗುಂತಕ ಕಿಡಿಗೇಡಿಗಳು ಹಾಗೂ ಪುಂಡರಿಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಬಸ್ ಚಾಲಕ ಹಾಗೂ ಜಾನೇವಾಡಿ ಗ್ರಾಮಸ್ಥರು ಆಗಮಿಸಿದ್ದರಿಂದ ನಿರ್ವಾಹಕ ಬಚಾವ್ ಆಗಿದ್ದಾನೆ ಎನ್ನಲಾಗಿದೆ. ಹಲ್ಲೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. KSRTC ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಪೊಲೀಸರಿಗೆ ದೂರು ನೀಡಿದೆ. ಬಸ್ ಚಾಲಕ ಎಂ. ಎ. ಶೇಖ್ ನಿರ್ವಾಹಕನನ್ನು ಹಲ್ಲೆಯಿಂದ ಉಳಿಸಿಕೊಂಡಿದ್ದು, KSRTC ಚಾಲಕ ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದರು.