SHARE

ಖಾನಾಪುರ: ನಿಟ್ಟೂರು ಗ್ರಾಮದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಖಾನಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಖಾನಾಪೂರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಕ್ರಮ ವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವುದರಲ್ಲಿ ಖಾನಾಪೂರ ಪೊಲೀಸ್ ಯಶಶ್ವಿಯಾಗಿದ್ದಾರೆ. ಇವರಿಂದ ಏಂಟು ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಶಿವಾಜಿ ನಾಮದೇವ ಹಿಂಡಿ (40) ಭರಮಾಣಿ ರಾಮಾ ನಾಯ್ಕ (57) ಇಬ್ಬರೂ ನಿಟ್ಟೂರು ಗ್ರಾಮದವರಾಗಿದ್ದು. ಇವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ ಎಂದು ಖಾನಾಪೂರ ಪಿಎಸ್ಐ ಬಸನಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.