SHARE

ಖಾನಾಪುರ: ಜೆಸಿಇ ಬೆಳಗಾವಿ ವಲಯ, ಡಿಸಿಇ ಬೆಳಗಾವಿ ವಲಯ ಮತ್ತು ಡಿವೈಎಸ್ಇ ಬೆಳಗಾವಿ ಉಪ ವಲಯದ ನಿರ್ದೇಶನದ ಮೇರೆಗೆ ಕಳೆದ ಎಪ್ರಿಲ್ ೨೧ರಂದು ಖಾನಾಪುರ ತಾಲೂಕಿನ ಗೊಲ್ಯಾಳಿ ಗ್ರಾಮದ ತಾನಾಜಿ ಸಹದೇವ ಗುರವ ಮನೆಗೆ ದಾಳಿ ಮಾಡಿ, ಐದು ಲೀಟರ್ ಕಾಜು ಒರಾಕ್ ಸರಾಯಿ ಮತ್ತು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ಖಾನಾಪುರ ಅಬಕಾರಿ ಠಾಣೆಯಲ್ಲಿ ಉಪ ಇನ್ಸಪೆಕ್ಟರ್ ರೂಪಾ ಶಿರೋಳಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಖಾನಾಪುರ್ ಜೆಎಂಎಫಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿ ಪತ್ರಿಕಾ ಮಾಹಿತಿ ತಿಳಿಸಿದ್ದಾರೆ.