SHARE

ಬೆಳಗಾವಿ:ನೂತನ ಮೊಬೈಲ್‌ ಶಾಪ್ ತೆರೆಯಲು ಜಿಎಸ್ಟಿ (GST) ನಂಬರ್ ಮಂಜೂರಿಗೆ ಅರ್ಜಿ ಸಲ್ಲಿಸಿದ್ದ ಅಋಜಿದಾರನಿಂದ ₹ 2,000 ಪೀಕಲೆತ್ನಿಸಿದ ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಬೃಷ್ಟಾಚಾರ ನಿಗೃಹ ದಳದ ಬಲೆಗೆ ಬಿದ್ದಿದ್ದು, ವಶಕ್ಕೆ ಪಡೆಯಲಾಗಿದೆ.
ಮೆಹಬೂಬ ಬಾಬುಲಾಲ ಸಿಪಾಯಿ ಎಂಬುವವರೇ ಬಂಧಿತ ಆರೋಪಿತ ಅಧಿಕಾರಿ. ಕಾಕತಿ ಮೂಲದ ನದೀಮ‌ ಮುಲ್ಲಾ ಎಂಬುವವರು ಜಿಎಸ್ಟಿ ನಂಬರ್ ನೊಂದಾಯಿಸಲು ಅರ್ಜಿ ಸಲ್ಲಿಸಿದ್ದರು. ನಂಬರ್ ಮಂಜೂರು ಮಾಡಲು ಅಧಿಕಾರಿ ಲಂಚ ಕೇಳಿದ್ದರಿಂದ‌ ಎಸಿಬಿ ಕಚೇರಿಗೆ ದೂರು ಕೊಡಲಾಗಿತ್ತು. ಆರೋಪಿತ ಅಧಿಕಾರಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದು, ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಸಿಬಿ ಎಸ್ಪಿ ಬಿ.ಎಸ್.ನ್ಯಾಮಗೌಡರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಎ.ಎಸ್.ಗುದಿಗೊಪ್ಪ ಮತ್ತು ಸುನಿಲಕುಮಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು