SHARE

ಬೆಳಗಾವಿ: ಹಣದ ವ್ಯೆವಹಾರಕ್ಕೆ ಸಮಂಧಿಸಿದಂತೆ ಇಬ್ಬರ ನಡುವೆ ನಡೆದ ಜಗಳ ಬಿಡಿಸಲು ಹೋದ ದಾಭಾ ಮಾಲೀಕನ ಮೇಲೆ ಹಲ್ಲೆ ನಡೆದಿದ್ದು ಆಸ್ಪತ್ರೆಗೆ ಸಾಗಿಸುವ‌ ದಾರಿ ಮಧ್ಯ ಧಾಬಾ ಮಾಲೀಕ ಸಾವನ್ನೊಪ್ಪಿದ ಘಟನೆ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಎಂ ಕೆ ಹುಬ್ಬಳ್ಳಿ ಗ್ರಾಮದ ಪಂಚವಟಿ ಧಾಭಾ ಮಾಲೀಕ, ಪ್ರಕಾಶ ನಾಗನೂರು(38) ಮೃತಪಟ್ಟಿದ್ದು ನಿನ್ನೆ ಸಂಜೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

1500 ರೂ ಹಣದ ವ್ಯೆವಹಾರಕ್ಕೆ ಸಮಂಧಿಸಿದಂತೆ,ಯುವಕರ ಗುಂಪೊಂದು ಹಣ ಕೇಳಲು ಧಾಬಾಗೆ ಹೋಗಿದ್ದರು ಈ ಸಂಧರ್ಭದಲ್ಲಿ ಗಲಾಟೆಯಾಗಿದೆ.ಯುವಕರ ಗುಂಪು ಧಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಎರಡು ಗುಂಪುಗಳ ನಡೆವೆ ಮಾತಿನ ಚಕಮಕಿ ನಡೆದ ನಂತರ ಮಾರಾಮಾರಿ ನಡೆದಿದೆ. ಜಗಳ ಬಿಡಿಸುವ ಮದ್ಯ ಪ್ರವೇಶ ಮಾಡಿದ್ದ ಪ್ರಕಾಶ ನಾಗನೂರು ಎಂಬಾತನ ಮೇಲೆ, ಯುವಕರ ಗುಂಪಿನಿಂದ ಮಾರಣಾಂತಿಕ ಹಲ್ಲೆಗೊಳಗಾದ ಹಿನ್ನೆಲೆಯಲ್ಲಿಸಾವನ್ನೊಪ್ಪಿದ್ದಾನೆ. ಸ್ಥಳಕ್ಕೆ ಕಿತ್ತೂರ ಪೋಲೀಸರು ದೌಡಾಯಿಸಿದ್ದು,ಈ ಪ್ರಕರಣಕ್ಕೆ ಸಮಂಧಿಸಿದಂತೆ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.