SHARE

ಗೋಕಾಕ ಸೆ 24 :

ದೇಶದ ಆರೋಗ್ಯ ರಕ್ಷಣೆಗೆ ಸೇನಾನಿಗಳಂತೆ ನಿರಂತರ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರ ಹಾಗೂ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು

ಶುಕ್ರವಾರದಂದು ನಗರದ ತಮ್ಮ ಕಛೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ಆಶಾ ಹಾಗೂ ಆರೋಗ್ಯ ಇಲಾಖೆಯ ಡಿ ಗ್ರೂಪ್ ನ ಒಟ್ಟು 350 ನೌಕರರಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಕೋವಿಡ್ ಸಮಯದಲ್ಲಿ ಕೋರೋನಾ ಪಾಸಿಟಿವ್ ಇದ್ದವರ ಮನೆ ಬಾಗಿಲಿಗೆ ಔಷಧಿ ನೀಡುವ ಕಾರ್ಯವನ್ನು ಹಾಗೂ ಅವರ ಯೋಗಕ್ಷೇಮ ವಿಚಾರಣೆ ಮಾಡುವ ಕೆಲಸ ಮಾಡಿ ಹಲವಾರು ಜನರ ಜೀವ ರಕ್ಷಿಸಿ. ಸಾರ್ವಜನಿಕರ ಮನೆ ಮನೆಗೆ ತೆರಳಿ ಸರ್ವೇ ಮಾಡುವ ಕಾರ್ಯವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ .ಗೋಕಾಕ ಮತಕ್ಷೇತ್ರದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಬೇಕಾದರೆ ಆಶಾ ಹಾಗೂ ಆರೋಗ್ಯ ಇಲಾಖೆ ನೌಕರರ ಪ್ರಯತ್ನ ಮುಖ್ಯವಾಗಿದ್ದು, ಇಲ್ಲಿಯವರೆಗೆ ಕಾರ್ಮಿಕ ಇಲಾಖೆಯಿಂದ ಗೋಕಾಕ ಮತಕ್ಷೇತ್ರದಾದ್ಯಂತ 11 ಸಾವಿರ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕಾರ್ಮಿಕ ಇಲಾಖೆ ನಿರೀಕ್ಷರ ಪಾಂಡುರಂಗ ಮಾವರಕರ, ಲಕ್ಷ್ಮೀಕಾಂತ ಎತ್ತಿನಮನಿ, ಸುರೇಶ ಸನದಿ ಉಪಸ್ಥಿತರಿದ್ದರು.

ಪ್ರಧಿನಿದಿ.ಉಮೇಶ್ ನಂದಗಾಂವ.