SHARE

ಬೆಂಗಳೂರು : ವಿಧಾನಸಭೆ ಇನ್ನು ಒಂದು ವರ್ಷ ಬಾಕಿ ಇರುವ ಹಿನ್ನಲೆಯಲ್ಲಿ ಮತ್ತೆ ಕರ್ನಾಟಕದಲ್ಲಿ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೆ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸಿ ಪಕ್ಷಗಳು ಟಿಕೆಟ್ ಕೂಡ ಹಂಚಿಕೆ ಮಾಡುತ್ತಿವೆ.ಜೂನ್ 14 ಕ್ಕೆ ಕೊನೆಗೊಳ್ಳುತ್ತಿರುವ ಕರ್ನಾಟಕದ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಿದೆ.ಇನ್ನು ಲಕ್ಷ್ಮಣ ಸವದಿ ಕೂಡ ಇದೆ ಉಪ ಮುಖ್ಯಮಂತ್ರಿ ಆಗಿ ನಂತರ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಬಳಿಕವೇ ಅವರು ತಮ್ಮ ಅಧಿಕಾರ ಮುಂದುವರೆಸಿದ್ದರು.

ಲಕ್ಷ್ಮಣ ಸವದಿ, ಆರ್ .ಬಿ. ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ರಮೇಶ್ ಗೌಡ, ವೀಣಾ ಅಚ್ಚಯ್ಯ, ನಾರಾಯಣಸ್ವಾಮಿ, ಲೇಹರ್ ಸಿಂಗ್ ಇವರ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೂನ್ 3ರಂದು ಮತದಾನ ನಡೆಯಲಿದ್ದು ಅಂದೇ ಫಲಿತಾಂಶ ಘೋಷಣೆಯಾಗಲಿದೆ.