SHARE

ಬೆಳಗಾವಿ:‌ ಬೀಮ್ಸ್ ಕಾಲೇಜು ಚುನಾವಣೆ ವಿಚಾರದಲ್ಲಿ ಹಾಸ್ಟೆಲ್ ನಲ್ಲಿ ಗಲಾಟೆ ಹಿನ್ನೆಲೆ ಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿಯಾಗಿದ್ದು 15ಜನ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ನಗರದ ಬೀಮ್ಸ್ ಕಾಲೇಜಿನಲ್ಲಿ ಮೇ 4ರಂದು ತಡರಾತ್ರಿ ಮೆಡಿಕಲ್ ವಿದ್ಯಾರ್ಥಿಗಳು ಕಾಲೇಜು ಚುನಾವಣಾ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ‌ ಬಂದಿದೆ. ಗಲಾಟೆಯಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ರಾಜಸ್ತಾನ ಮೂಲದ ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ತೀವ್ರ ಹಲ್ಲೆಗೆ ಒಳಗಾಗಿದ್ದ ವಿಧ್ಯಾರ್ಥಿಯ ಮೂಗು, ಕಿರುಬೆರಳಿಗೆ ಗಾಯವಾಗಿದ್ದು ಮೂಗಿನ ಶಸ್ತ್ರ ಚಿಕಿತ್ಸೆಗೆ ರಾಜಸ್ತಾನದ ಏಮ್ಸ್ ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕಾಲೇಜಿನಲ್ಲಿ ಗಲಾಟೆ ಆಗಿರುವ ಸಂಬಂಧ ಬಿಮ್ಸ್ ಆಡಳಿತಾಧಿಕಾರಿಯಿಂದ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಮೇರೆಗೆ 15ಜನ ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.