ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ದಲಿತ ಸ್ವಾಮೀಜಿ ತಮ್ಮ ಬಾಯೊಳಗೆ ಹಾಕಿದ್ದ ಅನ್ನವನ್ನು ವಾಪಾಸ್ ತೆಗೆಸಿ ತಿನ್ನುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲನ್ ಕಾರ್ಯಕ್ರಮದಲ್ಲಿ ದಲಿತ ಸ್ವಾಮೀಜಿ ಬಾಯೊಳಗೆ ಹಾಕಿದ್ದ ಅನ್ನವನ್ನು ವಾಪಾಸ್ ತೆಗೆಸಿ ತಿಂದಿದ್ದಾರೆ. ದಲಿತ ಸ್ವಾಮೀಜಿ ಬಾಯಿಂದ ತಿಂದರೆ ಏನಾಗುತ್ತೆ. ನಾವೆಲ್ಲರೂ ಅಣ್ಣ-ತಮ್ಮಂದಿರೇ. ಎಂಜಲು ತಿಂದರೆ ಏನಾದ್ರೂ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.