SHARE

ಬೆಳಗಾವಿ: ಕರ್ನಾಟಕದ ಎರಡನೇ ರಾಜಧಾನಿ ಅಂತ ಕರೆಯಿಸಿಕೊಳ್ಳುವ ಈ ಕುಂದಾನಗರಿಯಲ್ಲಿ ಹೆಗ್ಗುರುತು ಎಂಬಂತೆ ಹಲವು ವರ್ಷಗಳ ಹಿಂದೆ ತಲೆ ಎತ್ತಿ ನಿಂತಿದೆ ಸುವರ್ಣ ಸೌಧ.ಆದರೆ ಇದು ಎಷ್ಟರ ಮಟ್ಟಿಗೆ ಬಳಕೆಯಾಗಿದೆ, ಬಳಕೆ ಆಗುತ್ತಿದೆ ಅನ್ನೋದು ಇಂದಿಗೂ ಗಡಿನಾಡಿನ ಜನರ ಯಕ್ಷ ಪ್ರಶ್ನೆ. ಇನ್ನೂ ವಿಪರ್ಯಾಸವೆಂದರೆ ಈ ಸುವರ್ಣ ಸೌಧದ ಹೆಬ್ಬಾಗಿಲಲಲ್ಲಿ ಶಾವಿಗೆ ಒಣಗಿ ಹಾಕಲಾಗಿದೆ. ಹೌದು, ಹೀಗೊಂದು ಘಟನೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದು, ಗಡಿನಾಡಿನ ಮಂದಿ ತಲೆ ತಗ್ಗಿಸುವಂತಾಗಿದೆ. ಇಲ್ಲಿನ ನಿರ್ವಹಣೆ ಹೊತ್ತಿರುವವರಿಗೆ ಜನ ಛೀಮಾರಿ ಹಾಕುತ್ತಿದ್ದಾರೆ.ಸದ್ಯ ಈ ಫೋಟೋ ಬೆಳಗಾವಿಯ ಸಾಮಾಜಿಕ
ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.