SHARE

ಬೆಳಗಾವಿ: ಬೆಳಗಾವಿಯ ಶಾಸ್ತ್ರೀನಗರದ ಪಾಟಿದಾರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಆತ್ಮ ನಿರ್ಬರ್ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂಪಾಯಿಗಳ ಚೆಕ್‍ನ್ನು ಶಾಸಕ ಅಭಯ್ ಪಾಟೀಲ್ ವಿತರಿಸಿದರು.

ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಬೀದಿ ವ್ಯಾಪಾರಿಗಳು ಆರ್ಥಿಗಕವಾಗಿ ಸದೃಢ ಮಾಡುವ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆಯೂ ನೂರಾರು ವ್ಯಾಪಾರಿಗಳಿಗೆ ಚೆಕ್ ಮೂಲಕ ಹಣ ನೀಡಿದ್ದೇವೆ.

ಇಂದು ಸುಮಾರು 150 ವ್ಯಾಪಾರಿಗಳಿಗೆ ಚೆಕ್ ನೀಡುತ್ತಿದ್ದೇವೆ. 10 ಸಾವಿರ ರೂಪಾಯಿ ಒಳ್ಳೆಯ ರೀತಿ ಬಳಸಿಕೊಂಡು ವಾಪಸ್ ತುಂಬಿದರೆ 20 ಸಾವಿರ ನೀಡಲಾಗುತ್ತದೆ. 20 ಸಾವಿರ ರೂಪಾಯಿ ತುಂಬಿದರೆ 50 ಸಾವಿರ ನೀಡಲಾಗುತ್ತದೆ. ನಮ್ಮ ದಕ್ಷಿಣ ಕ್ಷೇತ್ರದ ವ್ಯಾಪಾರಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ನಗರಸೇವಕರಾದ ಗಿರೀಶ್ ಧೋಂಗಡಿ, ನಿತಿನ್ ಜಾಧವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.